top of page

Gaalipata Habba

ಗಾಳಿಪಟ ಹಬ್ಬ or the Kite Festival is generally celebrated on Ashada

Ekadasi. The month of Ashada with it’s windy days is suitable for kite

flying. For most of us it brings in memories of our childhood days,

wherein we used to make kites and enjoy every bit of flying them.


This year we celebrated it on 6th July 2019, Saturday at Ravugodlu. It

was an event for the Samvida family to come together and enjoy kite

flying. What could be more fun than getting outside to make a colorful

kite dance in the breeze?



 

ಸಾತ್ವಿಕ್ ಮತ್ತು ಶ್ರೇಯಾ ರ ಅಜ್ಜಿಯ ಗಾಳಿಪಟ ಹಬ್ಬದ ಅನುಭವ:


ಅಂದು ಆಷಾಢ ಶುದ್ಧ ಚತುರ್ಥೀ. ಹಗಲು ಹತ್ತೂವರೆ ಹನ್ನೊಂದರ ಸಮಯ.ಆಕಾಶ ನಿರಭ್ರ ವಾಗಿ ತ್ತು. ಗಾಳಿ ತುಸು ಮಂದವಾಗಿ ಬೀಸುತ್ತಿತ್ತು. ವಾತಾವರಣ ಚೇತೋಹಾರಿ ಯಾಗಿತ್ತು. ಬಯಲಿನಲ್ಲಿ ಒಂದು ಅಪರೂಪದ ದೃಶ್ಯ. ಮಕ್ಕಳೂ ಅವರ ತಂದೆ ತಾಯಿ ಯರು ಎಲ್ಲ ಸೇರಿ ಪಟ ಹಾರಿ‌ಸುವ ದೃಶ್ಯ. ಮಕ್ಕಳ ಉತ್ಸಾಹ ಮೇರೆ ಮೀರಿ ತ್ತು. ಅದನ್ನೂ ಮೀರಿ ಸಿತ್ತು ಅಪ್ಪ ಅಮ್ಮ ಮತ್ತು ಕೆಲ ಶಿಕ್ಷಕರ ಉತ್ಸಾಹ. ಅವರೆಲ್ಲರೂ ಮತ್ತೆ ಅವರ ಬಾಲ್ಯ ಕ್ಕೆ ಜಾರಿ ಹೋಗಿ ದ್ದರು.ಕುಳಿತು ನೋಡುತ್ತಿದ್ದ ಕೆಲ ಹಿರಿಯರಿಗೂ ಉಲ್ಲಾಸ ಉತ್ಸಾಹ.


ಅದು ರಾವಗುಡ್ಲು ಎಂಬ ಪ್ರದೇಶ.ಅಲ್ಲೇ ಇವರೆಲ್ಲ ರ ಕಲರವ. ಒಂದು ಪಕ್ಕದಲ್ಲಿ ಆಚಲವಾಗಿ ನಿಂತ ಕಲ್ಲಿನ ಬೆಟ್ಟ. ಮಕ್ಕಳಿಗೆ ನೀನೂ ಹೀಗೆ ಶಕ್ತಿ ಶಾಲಿಯಾಗಿ ,ಉನ್ನತ ವಾಗಿ ಬೆಳೆ ಯಬೇಕು ಎಂದು ಹೇಳುತ್ತಿರುವಂತಿದ್ದರೆ ಸುತ್ತ ಮುತ್ತ ಬೆಳೆಸಿರುವ ಅನೇಕಬಗೆಯ ಹಣ್ಣಿನ ಮರಗಳು ಹೂವಿನ ಗಿಡಗಳು.ಮನೋಹರವಾದ ವಾತಾವರಣ. ಸರಳವಾದ ಸುಂದರವಾದ ಕುಟೀರಗಳು. ಪಾಠಶಾಲೆ. ಗುರುಕುಲ ವನ್ನು ನೆನಪಿಸುವಂಥಾ ಸಂಸ್ಕೃತಿ. ಇಂಥಾ ಸ್ಥಳ ದಲ್ಲಿ ಸೇರಿ ಕಲಿತು, ನಲಿದು ಅಡಿ ಬೆಳೆ ಬೆಳೆಯುವ ಮಕ್ಕಳ ಬುದ್ಧಿ ದೇಹ ,ಚೇತನ ಪ್ರತಿ ಯೊಂದೂ ವಿಕಾಸ ವಾಗುತ್ತಿರುವುದು ಸಂತಸದ ವಿಷಯ.


ಮತ್ತೆ ಪಟ ದ ಹಬ್ಬಕ್ಕೆ ಮರಳೋಣ.


ಪಟ ಪಟ ಹಾರು ಗಾಳಿಪಟ.

ಪಟಪಟ ಮೇಲೇ ಏರುಪಟ


ಎಂಬ ಮಕ್ಕಳ ಮನದ ತುಡಿತ ವೋ ಎಂಬಂತೆ ಒಂದನ್ನು ಮೀರಿಸಿ ಒಂದು ಪಟ ಹಾರಾಡಿದವು. ಹಿರಿಯರೂ ಮಕ್ಕಳಿಗೆ ಕೈ ಜೋಡಿಸಿ ಪಟ ಹಾರಿಸಿದರು. ಹಾರದಿ ರುವವರ ಪಟವನ್ನೂ ಹಾರಿಸಿ ಆ ಮಕ್ಕಳ ಮುಖದಲ್ಲೂ ನಗು ತಂದರು.


ಒಂದೇ ಮನೆಯ ಸದಸ್ಯ ರಂತೆ ಎಲ್ಲರೂ ಸೌಹಾರ್ದದಿಂದ ಸಂಭ್ರಮಿಸಿ ನಕ್ಕು ನಲಿದರು.

ಗಾಳಿ ಯೂ ಮಂದ ಮಾರುತವಾಗಿ ತಕ್ಕಮಟ್ಟಿಗೆ ಸಹಕಾರ ನೀಡಿತು.

ನಂತರ ಎಲ್ಲರಿಗೂ ಸಾತ್ವಿಕ ವಾದ ರಸಗವಳದ ಭೋಜನದೊಂದಿಗೆ ಕಾರ್ಯಕ್ರಮದ ಸಮಾರೋಪ ವಾಯಿತು. ಎಲ್ಲರ ಮೈ ಮನಸ್ಸುಗಳೂ ತೃಪ್ತವಾಗಿ ಒಬ್ಬರ ನ್ನೊಬ್ಬರು ಬೀ ಳ್ಕೊಂಡರು.


ಇಂದಿನ ಕಾಂಕ್ರೀಟ್ ಕಾಡಾಗಿ ರುವ ನಗರ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ಆಟದ ಮೈದಾನದ ಕೊರತೆ ಖಂಡಿತಾ ಇದೆ. ಹಾಗಿರುವಾಗ ಸ್ವಚ್ಛಂದ ವಾದ ವಾತಾವರಣ ದಲ್ಲಿ ಇಂತಹಾ ಕಾರ್ಯಕ್ರಮ ಆಯೋಜಿಸಿದ್ದು ಪ್ರಶಂಸನೀ ಯ. ಒಟ್ಟಿನಲ್ಲಿ ಒಂದು ಅಪರೂಪದ ಚೇತೋಹಾರಿ ಅನುಭವ.

710 views1 comment

1 Kommentar


sudheer.subbaramu
15. Okt. 2019

Kids are only thought as K for Kite !!!.....This is the only and best way to experience K for Kite and K for Knowledge too !!!

Gefällt mir
bottom of page