Parisarada Padyagalu - By Agastya
- Vallish Herur
- Mar 25, 2023
- 1 min read
ಸೂರ್ಯನ ಬೆಳಕಿಗೆ ಅರಳಿತು ಹೂವು
ನನ್ನಯ ಮೊಗದಲಿ ಅರಳಿತು ನಗುವು |
ಪ್ರಕೃತಿ ನಿನ್ನಯ ಮಡಿಲು
ಪರಮ ಪಾವನ ಮುಗಿಲು ||
ಹಸಿರು ಗಿಡ ಮರಗಳ ಸಾಲೇ
ದೇವರಿಗರ್ಪಿಸುವೆ ನಿನ್ನ ಹೂವಿನ ಮಾಲೆ
|| ಪ್ರಕೃತಿ ನಿನ್ನಯ ಮಡಿಲು ||
ಗಿಡ ಮರದಲ್ಲಿದೆ ಹೂ ಕಾಯಿ
ನಿನ್ನನಾ ವಂದಿಸುವೆ ಭೂ ತಾಯಿ
|| ಪ್ರಕೃತಿ ನಿನ್ನಯ ಮಡಿಲು ||
- ಸುರಭಿ
ಪರಿಸರದಲ್ಲಿ ಪ್ರಾಣಿಗಳಣ್ಣ
ಪರಿಸರದಲ್ಲಿ ಪಕ್ಷಿಗಳಣ್ಣ
ಇವುಗಳೆಲ್ಲವನ್ನು ನೋ ಡುತ ನಾವು
ನಗುತಾ ನಗುತಾ ಜಿಗಿಯುವೆವಣ್ಣ||೧||
ಇಲಿ-ಮೊಲವಾದರೆ ಭಯವಿಲ್ಲ
ಆನೆ-ಕರಡಿಗಳು ಭಯವಣ್ಣ
ಸುಂದರವಾದ ಈ ಪರಿಸರವ
ನಾಶಮಾಡುವುದು ಬೇಡಣ್ಣ||೨||
ಪರಿಸರವನ್ನು ನೋ ಡಿ ನಾವು
ಕಲಿಯುವುದು ಸಾಕಷ್ಟಿದೆಯಣ್ಣ
ಇವುಗಳ ರಕ್ಷಣೆ ಮಾಡುವುದು
ನಮ್ಮಯ ಮೊದಲ ಕೆಲಸವಣ್ಣ||೩||
- ಶ್ರೀರಾಮ
ಪ್ರಕೃತಿ ಎಂದರೆ ನಿಮಗಿಷ್ಟ
ಪ್ರಕೃತಿಗೆ ನಾವು ಬಲುಕಷ್ಟ
ನದಿ ಸರೋವರಗಳು ಬಲು ಚಂದ
ನಾವೆಲ್ಲರೂ ಅದರ ಕಂಡರೂ
ನದಿಯೇ ತಂದೆ ತಾಯಿ
ನದಿ ನಮ್ಮನ್ನು ರಕ್ಷಿಸುತ್ತದೆ
ವಾಯು ಇಲ್ಲದೆ ಪ್ರಾಣ ಇಲ್ಲ
ನಾವು ಆಮ್ಲಜನಕ ತೆಗೆದುಕೊ ಂಡು ಇಂಗಾಲವನ್ನು ಬಿಡುವೆವು
ವಾಯು ತಂದೆ ತಾಯಿ
ವಾಯು ನಮ್ಮನ್ನು ರಕ್ಷಿಸುತ್ತದೆ
- ಶ್ರದ್ಧಾ
ಪವನನು ಏಕೆ ಅದೃಷ್ಯನು ಸಕಲ?
ಕತ್ತಲು ಏಕೆ ಕರಿಯೇ ?
ನೀ ರಿನಲ್ಲೇ ಏಕೆ ಬೆಳಿಯುತ್ತದೆ ಕಮಲ?
ಇದೇ ಪ್ರಕೃತಿಯ ಸುಂದರತೆ...
‘ರಿಟ್ ರಿಟ್’ಎಂದು ಕೂಗುವ ಹುಳಕ್ಕೂ ಇದೆ ಒಂದು ಮಹತ್ವ
ಬೆಟ್ಟದ ತಪ್ಪಲಿನಲ್ಲಿ ಕುಳಿತ ಅಜ್ಜನಿಗೂ ಇದೆ ಅಸ್ತಿತ್ವ
ಪ್ರಕೃತಿಯಲ್ಲಿ ಹುಡುಕುವೆ ನಾನು ಗುರುತ್ವ
ಇದರ ಸುಂದರತೆನ ಗಮನಿಸೋ ಣ...
ಸಮುದ್ರದ ನೀಲಿ ನೀಲಿ ಅಲೆಗಳು
ಅದರಲಿ ಬಣ್ಣಬಣ್ಣದ ಮೀನುಗಳು
ಸಾಗರನೇ ಇವುಗಳಿಗೆ ರಾಜ, ಉಳಿಸುವುದು ಇವನನ್ನು ಆಗಿದೆ ಸಹಜ
ಇದರ ಸುಂದರತೆನ ತಿಳಿಯೋಣ...
ರಭಸದಿಂದ ಹರಿಯುತ್ತಾಳೆ ಗಂಗೆ
ಹಿಮಾಲಯದಿಂದ ಕೆಳಕ್ಕೆ
ಎಂಥ ರಭಸವಿದು, ಎಂಥ ಎತ್ತರ ಹಿಮಾಲಯದ್ದು
ಇದೇ ಪ್ರಕೃತಿಯ ಸುಂದರತೆ...
- ಶಿಖಾ
ಹಸಿರು ಹಸಿರಿನ ಚೆಲುವೇ
ನೆಮ್ಮದಿ ಕೆಡಿಸಲು ನೀ ಜೋಕೆ
ಎಲ್ಲೆಲ್ಲಿ ನಿನ್ನನು ನೋಡಿದ ನನ್ನನ್ನು
ಆಕರ್ಷಿಸಲು ನೀ ಜೋಕೆ
ಉಸಿರು ಹಸಿರನು ಹೊರಹೊ ಮ್ಮಿಸುತ
ಎಲ್ಲರ ಮನವನು ಮೆಚ್ಚಿಸಿದೆ
ಇದರಲಿ ಅಡಗಿದ ಚಿಲಿಪಿಲಿ ನಾದವು
ಕೇಳುವ ನಾನೇ ಧನ್ಯನಾದೆ
ಊಟ ಉಸಿರು ಪ್ರಾಣ ನೀಡಿದ
ನಿನ್ನನ್ನೊಮ್ಮೆ ನಮಿಸುವೆನು
ಎಲ್ಲಜೀವಕ್ಕೂ ಸ್ತಂಭವಾಗಿರುವ
ನೀನೇ ಜಗತಿನ ಸರ್ವಸ್ವ
- ಮುಕುಂದ
ಪ್ರಕೃತಿಯ ನಾಲ್ಕು ಅಂಗಗಳು
ಸುಸ್ತಾಗಿದೆ ನೀ ಹರೆಯುವೆ
ಎಲ್ಲರ ದಣಿವನ್ನು ಹರಿವೆ
ಜೀ ವನ ಜೀ ವರಸವೆ
ನಿನಗೆ ನನ್ನ ನಮನ|೧|
ದಿನದಿನವು ನೀ ಹುಟ್ಟುವೆ
ಪ್ರಪಂಚಕ್ಕೆ ಬೆಳಕು ನೀ ನೆ
ಕಣ್ಣಿನ ದೃಷ್ಟ ನೀ ಡುವೆ
ನಿನಗೆ ನನ್ನ ನಮನ|೨|
ಸದಾಕಾಲ ನೀ ಬೀ ಸುವೆ
ಜಗತ್ತಿನ ಉಸಿರು ನೀ ನೆ
ನೀ ನಿಲ್ಲದೆ ನಾ ಹೇ ಗೆ ಬದುಕುವೆ
ನಿನಗೆ ನನ್ನ ನಮನ|೩|
ಎಲ್ಲರ ಬಾರ ಹೊ ರವೆ
ಎಲ್ಲರ ಹಸಿವನು ನೀ ಗಿಸುವೆ
ಎಲ್ಲರ ತ್ಯಾ ಗ್ಯ ಅಡಗಿಸುವೆ
ನಿನಗೆ ನನ್ನ ನಮನ|೪|
– ಭಾರ್ಗ ವ.ಎಮ್.ಎಸ್
ಬಣ್ಣಬಣ್ಣದ ಚಿಟ್ಟೆ
ಸಣ್ಣಸಣ್ಣದ ಸಾಸಿವೆ।
ಅಂದ ಚಂದದ ಜಿಂಕೆ
ಅಡಿಗೆಗೆ ಹಾಕುವ ಜೀರಿಗೆ
ಎಲ್ಲವು ನಿನ್ನಲ್ಲಿ ಓ ತಾಯೆ ತಾಯೆ!।।
ಝುಳು ಝುಳು ಹರಿಯುವ ನೀ ರು
ಫಳ ಫಳ ಹೊ ಳೆಯುವ ಮುತ್ತು ।
ಗಗನದಲ್ಲಿ ತೇಲುವ ಪಕ್ಷಿಗಳು
ಕಾನನದಲ್ಲಿ ಸಂಚರಿಸುವ ಮೃಗಗಳು
ಎಲ್ಲವು ನಿನ್ನಲ್ಲಿ ಓ ತಾಯೆ!।।
ಅದನ್ನು ಕೆಡಸುತ್ತಿರುವ ಮಾನವರು।
ಅನುಮಾನವಿಲ್ಲದೆ ಪಾಪಿಗಳು ।।
- ಅಕ್ಷೋಭ್ಯ





Comments